Friday, October 21, 2016

He Ram

ಹೇ ರಾಮ್
ಗಾಂಧಿಯ ಎದೆಗೆ ಗೋಡ್ಸೆ ಗುಂಡಿಟ್ಟಾಗ
ಹೇ ರಾಮ್ ಅಂತ ಯಾರೋ ಕೂಗಿಕೊಂಡರಂತೆ
ಗಡಿಬಿಡಿಯಲಿ ಯಾವುದೂ ಖಚಿತವಿರಲಿಲ್ಲ
ಅದು ಗಾಂಧಿಯ ಸ್ವರ ಅಂದರು ಹಲವರು
ಗೋಡ್ಸೆಯದಿರಬೇಕು ಅಂತ ಕೆಲವರು
ಹಾಗೇನೂ ಇರಲೇ ಇಲ್ಲ ಅಂದವರು ಮುಂದಿನವರು.
ಕಾಲ ಕಳೆದಂತೆ ವಿಷಯ ಜಟಿಲವಾಯಿತು.
ಕೊನೆಗೆ ಏನೂ ತಿಳಿಯದೆ
ಗಾಂಧಿಯ ಹಿಡಿದು,
ಗೋಡ್ಸೆಯ ಅಪ್ಪಿ
ಇಬ್ಬರಿಗೂ ಒಟ್ಟಿಗೇ  ಗುಂಡಿಕ್ಕತೊಡಗಿದರು ಜನರು
ಆಗ ಗುಂಡಿನ ಸದ್ದು ಬಿಟ್ಟು

ಬೇರೇನೂ ಕೇಳಿಸಲಿಲ್ಲ. 

No comments: