Sunday, June 8, 2014

Kayyara -100




ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ಇವತ್ತಿಗೆ ನೂರು ತುಂಬಿತು ( ಜನನ : ಜೂನ್ 8, 2015)

ಕಾರಣಾಂತರಗಳಿಂದ ಕೇರಳಕ್ಕೆ ಸೇರಿ ಹೋದ ಕನ್ನಡ ಮತ್ತು ತುಳು ಪ್ರದೇಶಗಳನ್ನು ಮತ್ತೆ ಕರ್ನಾಟಕ್ಕೆ ಸೇರಿಸಲು ದಣಿವರಿಯದೆ ದುಡಿದ ಮಹಾ ಚೇತನ ಕಯ್ಯಾರರದು. ' ಬೆಂಕಿ ಬಿದ್ದಿದೆ ಮನೆಗೆ' ಎಂದು ಅವರು ರೋಧಿಸಿದರು. ಹಿರಿಯ ಸಾಹಿತಿಯಾಗಿ,ಬಹುಭಾಷಾ ವಿದ್ವಾಂಸರಾಗಿ,ಸ್ವಾತಂತ್ರ್ಯ ಹೋರಾಟಗಾರರಾಗಿ,ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮಂಚೂಣಿಯ ನಾಯಕರಾಗಿ,ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಕರಾಗಿ,ನಿರಂತರವಾಗಿ ದುಡಿದವರು ಅವರು.
ಶ್ರೀಮುಖ, ಐಕ್ಯಗಾನ,ಪುನರ್ನವ,ಚೇತನ,ಕೊರಗ,ಶತಮಾನದ ಗಾನ,ಗಂಧವತಿ,ಪ್ರತಿಭಾ ಪಯಸ್ವಿನಿ, ಅವರ ಮುಖ್ಯ ಕವನ ಸಂಕಲನಗಳು. ರಾಷ್ಟ್ರಕವಿ ಗೋವಿಂದ ಪೈಯವರ ಒಡನಾಡಿಗಳು ಅವರು. 'ದುಡಿತವೆ ನನ್ನ ದೇವರು' ಎನ್ನುವದು ಅವರ ಆತ್ಮಕಥನ.
ನಾನು ಸುಳ್ಯ, ಮಂಗಳೂರಲ್ಲಿದ್ದಾಗ ಅವರನ್ನು ಆಗಾಗ ಭೇಟಿಯಾಗುತ್ತಿದ್ದೆ. ನನ್ನ ಮಾವನ ಮನೆಗೆ ಹೋಗುವ ಹಾದಿಯಲ್ಲಿ ಅವರ ಮನೆ. ಎಲ್ಲ ಅರ್ಥದಲ್ಲೂ ದೊಡ್ಡವರು ಅವರು

Thursday, May 15, 2014

On growing intolarence


ಅಸಹನೆ ಹೆಚ್ಚುತ್ತಿರುವ ಬಗೆಗೆ ನನ್ನ ಒಂದು ಲೇಖನ. ಓದಲು ಕ್ಲಿಕ್ ಮಾಡಬಹುದು
http://www.vijaykarnatakaepaper.com/Details.aspx?edorsup=Main&queryed=9&querypage=10&boxid=5285381&id=12911&eddate=05/03/2014



Saturday, May 10, 2014

ಭಾರತೀಯ ಪಠ್ಯಗಳಲ್ಲಿನ ಅಶ್ಲೀಲತೆಯ ಪ್ರಶ್ನೆ

ಇವತ್ತಿನ ಉದಯವಾಣಿಯಲ್ಲಿ ಭಾರತೀಯ ಪಠ್ಯಗಳಲ್ಲಿನ ಅಶ್ಲೀಲತೆಯ ಪ್ರಶ್ನೆಯ ಬಗ್ಗೆ ನಾನೊಂದು ಲೇಖನ ಬರೆದಿದ್ದೇನೆ. ಸೃಜನಶೀಲ ಲೇಖಕರು ಒಂದು ಬಗೆಯ ಆತಂಕ ಸ್ಥಿತಿಯಲ್ಲಿರುವುದರ ಬಗ್ಗೆ ಇದೀಗ ಬಹುಬಗೆಯ ಚರ್ಚೆಗಳು ನಡೆಯುತ್ತಿವೆ. ಸಂವಿಧಾನದ ವಿಧಿ 19 (2) ಇದೀಗ ಭಾರತದಲ್ಲಿನ ಮುಕ್ತ ಚಿಂತನೆಗೆ ದೊಡ್ಡ ತೊಡಕಾಗಿ ಪರಿಣಮಿಸುತ್ತಲಿದೆ. ಇದೇ ಕಾರಣದಿಂದಾಗಿ ಮುಕ್ತ ಚಿಂತನೆಗಳಿಗೆ ಸುಲಭವಾಗಿ ನಿರ್ಬಂಧ ಹಾಕುವ ಸಾಂವಿಧಾನಿಕ ವಿಧಿಗಳನ್ನು ಸೂಕ್ತವಾಗಿ ಪರಿಷ್ಕರಿಸುವ ಕಾಲ ಸನ್ನಿಹಿತವಾಗಿದೆ. ಈ ಹಿನ್ನೆಲೆಯಲ್ಲಿ ಇದೊಂದು ಲೇಖನ.

Thursday, April 10, 2014

Smt Yashoda Ben

ಜಗತ್ತಿಗೆಲ್ಲಾ ಕೇಳುತ್ತಿರುವ 
ಯಶೋದಾ ಬೆನ್ ಅವರ ನಿಟ್ಟುಸಿರಿನ ಮೌನ ಧ್ವನಿ
 ಶ್ರೀ ನರೇಂದ್ರ ಮೋದಿ ಅವರ ಅಂತರಂಗವನ್ನು ತಲುಪಲಿ, 
ಅಧಿಕಾರ ರಾಜಕಾರಣದ ಅಹಂಕಾರ ಕರಗಿ ಹೋಗಲಿ