Sunday, June 8, 2014

Kayyara -100




ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ಇವತ್ತಿಗೆ ನೂರು ತುಂಬಿತು ( ಜನನ : ಜೂನ್ 8, 2015)

ಕಾರಣಾಂತರಗಳಿಂದ ಕೇರಳಕ್ಕೆ ಸೇರಿ ಹೋದ ಕನ್ನಡ ಮತ್ತು ತುಳು ಪ್ರದೇಶಗಳನ್ನು ಮತ್ತೆ ಕರ್ನಾಟಕ್ಕೆ ಸೇರಿಸಲು ದಣಿವರಿಯದೆ ದುಡಿದ ಮಹಾ ಚೇತನ ಕಯ್ಯಾರರದು. ' ಬೆಂಕಿ ಬಿದ್ದಿದೆ ಮನೆಗೆ' ಎಂದು ಅವರು ರೋಧಿಸಿದರು. ಹಿರಿಯ ಸಾಹಿತಿಯಾಗಿ,ಬಹುಭಾಷಾ ವಿದ್ವಾಂಸರಾಗಿ,ಸ್ವಾತಂತ್ರ್ಯ ಹೋರಾಟಗಾರರಾಗಿ,ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮಂಚೂಣಿಯ ನಾಯಕರಾಗಿ,ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಕರಾಗಿ,ನಿರಂತರವಾಗಿ ದುಡಿದವರು ಅವರು.
ಶ್ರೀಮುಖ, ಐಕ್ಯಗಾನ,ಪುನರ್ನವ,ಚೇತನ,ಕೊರಗ,ಶತಮಾನದ ಗಾನ,ಗಂಧವತಿ,ಪ್ರತಿಭಾ ಪಯಸ್ವಿನಿ, ಅವರ ಮುಖ್ಯ ಕವನ ಸಂಕಲನಗಳು. ರಾಷ್ಟ್ರಕವಿ ಗೋವಿಂದ ಪೈಯವರ ಒಡನಾಡಿಗಳು ಅವರು. 'ದುಡಿತವೆ ನನ್ನ ದೇವರು' ಎನ್ನುವದು ಅವರ ಆತ್ಮಕಥನ.
ನಾನು ಸುಳ್ಯ, ಮಂಗಳೂರಲ್ಲಿದ್ದಾಗ ಅವರನ್ನು ಆಗಾಗ ಭೇಟಿಯಾಗುತ್ತಿದ್ದೆ. ನನ್ನ ಮಾವನ ಮನೆಗೆ ಹೋಗುವ ಹಾದಿಯಲ್ಲಿ ಅವರ ಮನೆ. ಎಲ್ಲ ಅರ್ಥದಲ್ಲೂ ದೊಡ್ಡವರು ಅವರು